ಅಪ್ಪಾ ಐ ಲವ್ ಯು ನೊಂದ ತಂದೆಯ ಕಥೆ...--ರೇಟಿಂಗ್: 3/5 ***
Posted date: 14 Sun, Apr 2024 01:44:41 PM
ತಮ್ಮ ಮಕ್ಕಳು ಸುಖವಾಗಿರಬೇಕು,  ನೆಮ್ಮದಿಯಾಗಿರಬೇಕೆಂದು ತಮ್ಮ ಜೀವವನ್ನೇ ತೇದು ಸಾಕುವ ತಂದೆ, ತಾಯಿಯನ್ನು ಅದೇ ಮಕ್ಕಳು  ಬೆಳೆದು ದೊಡ್ಡವರಾದ ಮೇಲೆ ನಿರ್ಲಕ್ಷದಿಂದ ಕಾಣುತ್ತಾರೆ. ಪೋಷಕರನ್ನು ಸಾಕುವುದೇ ಹೊರೆ ಎಂದು ತಿಳಿದು ಅನಾಥಾಶ್ರಮಕ್ಕೆ ಸೇರಿಸುತ್ತಾರೆ.  ಅಂಥಾ  ಒಬ್ಬ ಕೆಟ್ಟ ಮಗನ  ಕಥೆಯನ್ನು  ಅಪ್ಪಾ ಐ ಲವ್ ಯು ಚಿತ್ರದ ಮೂಲಕ  ನಿರ್ದೇಶಕ  ಅಥರ್ವ್ ಆರ್ಯ ಹೇಳಲು ಪ್ರಯತ್ನಿಸಿದ್ದಾರೆ. 
 
ಇದು ಸಾಮಾನ್ಯವಾಗಿ  ಎಲ್ಲರ ಮನೆಯಲ್ಲೂ  ನಡೆಯುವ ಕಥೆಯೇ,  ಆದರೆ ಇಲ್ಲಿ  ಕೆಟ್ಟ ಹಾಗೂ ಒಳ್ಳೆಯ  ಮಕ್ಕಳ ಕಾರಣದಿಂದ  ಕಥೆ ಒಂದಷ್ಟು ಬದಲಾವಣೆ ಆಗುತ್ತದೆ. ನಿರ್ದೇಶಕ  ಅಥರ್ವ್ ಆರ್ಯ ಅವರು ಅಂಥಾ ಒಬ್ಬ ಕೆಟ್ಟ ಮಗನಿಂದ ತಂದೆ ಅನುಭವಿಸಿದ ಮಾನಸಿಕ ಯಾತನೆಯನ್ನು   ತೆರೆಯ ಮೇಲೆ  ತೆರೆದಿಟ್ಟಿದ್ದಾರೆ.
 
ಹೆಂಡತಿಯ ಮಾತು ಕೇಳಿ ತಂದೆಯನ್ನು  ದೂಷಿಸುವ ಮಗನನ್ನು ಚಿತ್ರದಲ್ಲಿ  ಕಾಣಬಹುದು. ತನ್ನ ಕುಟುಂಬದಲ್ಲೇ  ಮಗ, ಸೊಸೆಯಿಂದ ಕಡೆಗಣನೆಗೆ  ಒಳಗಾದ ಅಮಾಯಕ ತಂದೆಯೊಬ್ಬ  ಹೇಗೆಲ್ಲಾ  ಪರಿತಪಿಸುತ್ತಾನೆ.  ಯಾವ ರೀತಿ ಮನದಲ್ಲೇ ನೋವು, ಯಾತನೆ  ಅನುಭವಿಸುತ್ತಾನೆ ಎಂಬುದನ್ನು  ಈ  ಚಿತ್ರದಲ್ಲಿ  ಕಣ್ಣಿಗೆ ಕಟ್ಟುವ ಹಾಗೆ   ಹೇಳಲಾಗಿದೆ.  ಇಲ್ಲಿ ತಂದೆ ಧರ್ಮಣ್ಣನಾಗಿ  ಹಿರಿಯನಟ ತಬಲಾನಾಣಿ  ಅವರು  ಅದ್ಭುತ ಅಭಿನಯ ನೀಡಿದ್ದಾರೆ. 
 
ತಂದೆಯ ಮಹತ್ವದ ಬಗ್ಗೆ ಕವಿರಾಜ್ ಸಾಹಿತ್ಯ ಬರದಿರುವ ಹಾಡು ಕೇಳುಗರ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ. ಒಂದೊಳ್ಳೆ ಮೆಸೇಜ್ ಇಟ್ಟುಕೊಂಡು, ಉತ್ತಮ ಕಂಟೆಂಟ್ ಮೂಲಕ  ಸೊಸೈಟಿಗೆ ಏನಾದರೂ ಕೊಡಬೇಕು ಎಂದೇ  ಈ  ಚಿತ್ರವನ್ನು ಅಥರ್ವ ಆರ್ಯ ನಿರ್ದೇಶಿಸಿದ್ದಾರೆ.
 
ಜೀವನದಲ್ಲಿ ಪ್ರತಿಯೊಬ್ಬ  ಮಕ್ಕಳು ತಮ್ಮ ತಂದೆಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ದೊಡ್ಡವರಾದ ಮೇಲೆ  ಅಪ್ಪ ಐ ಲವ್ ಯು ಅಂತಾ ಹೇಳಲೇಬೇಕು. ಚಿಕ್ಕವರಿದ್ದಾಗ ಹೇಳುವುದು ಸಾಮಾನ್ಯ. ಆದರೆ  ವಯಸ್ಸಾಗಿ,  ತನ್ನ ಕೈಲಿ ಏನೂ ಆಗುತ್ತಿಲ್ಲ  ಎಂದಾಗ ಅವರ ಮುಂದೆ ನಿಂತು  ಅಪ್ಪಾ ಐ ಲವ್ ಯು  ಅಂತಾ ಹೇಳಿದಾಗ ಆ  ಜೀವಕ್ಕೆ ಆಗುವ ಆನಂದ ಅಷ್ಟಿಷ್ಟಲ್ಲ,  ಒಂದು  ಸಂಸಾರದಲ್ಲಿ ಅಪ್ಪ  ಎಂದರೆ  ಎಷ್ಟು  ಮುಖ್ಯ. ಸಮಾಜದಲ್ಲಿ  ತಂದೆಯ ಸ್ಥಾನ ಏನು ಅಂತ  ಈ ಚಿತ್ರದಲ್ಲಿ ಹೇಳುತ್ತದೆ. ನೆನಪಿರಲಿ ಪ್ರೇಮ್ ಹಾಗೂ ಮಾನ್ವಿತಾ ಕಾಮತ್  ಅತಿಥಿ ಪಾತ್ರದಲ್ಲಿ ಅಭಿನಯಿಸುವ ಮೂಲಕ  ಗಮನ ಸೆಳೆಯುತ್ತಾರೆ. ಇನ್ನು  ತಬಲಾನಾಣಿ ಅವರ ಚಿತ್ರ ಜೀವನದಲ್ಲೇ ಇದೊಂದು ಅದ್ಭುತ ಪಾತ್ರವಾಗಿ ನಿಲುವುದರಲ್ಲಿ ಯಾವುದೇ ಸಂಶಯವಿಲ್ಲ.
 
ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವ ಅಪ್ಪ-ಮಗನ ಬಾಂಧವ್ಯದ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ತಂದೆ, ಮಕ್ಕಳಷ್ಟೇ ಅಲ್ಲ ಕುಟುಂಬ ಸಮೇತ ಹೋಗಿ ನೋಡುವ ಚಿತ್ರವಿದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed